ಅರಕಲಗೂಡು: ಕರ್ನಾಟಕಕ್ಕೆ ಕಾಲಿಡುವ ಪರ ಭಾಷಿಕರಿಗೆ ಕಡ್ಡಾಯವಾಗಿ ಕನ್ನಡದ ಅನಿವಾರ್ಯತೆ ಸೃಷ್ಟಿಸುವ ಸನ್ನಿವೇಶವನ್ನು ಕನ್ನಡಿಗರೆಲ್ಲರೂ ಒಗ್ಗೂಡಿ ನಿರ್ಮಾಣ ಮಾಡಲು ಸಂಕಲ್ಪ ತೊಡಬೇಕು ಎಂದು ಶಾಸಕ ಎ.ಟಿ. ರಾಮಸ್ವಾಮಿ ಅಭಿಪ್ರಾಯ ಪಟ್ಟರು.
ತಾಲೂಕಿನ ಕೊಣನೂರು ಬಿ.ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕçತಿ ಇಲಾಖೆಯ ಸಹಯೋಗದಲ್ಲಿ ಮಾತಾಡ್ ಮಾತಾಡ್ ಕನ್ನಡÀ ಅಭಿಯಾನದಡಿಯಲ್ಲಿ ಗೀತಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಭಾಷೆ ಮತ್ತು ಸಂಸ್ಕçತಿಯನ್ನು ಉಳಿಸಲು ಹೆಣಗಾಡಬೇಕಾದ ವಿಷಮ ಪರಿಸ್ಥಿತಿಯು ಎದುರಾಗಿರುವುದು ದುರಾದೃಷ್ಟಕರ ಸಂಗತಿಯಾಗಿದೆ. ಯುವ ಸಮೂಹ ಮಾತೃಭಾಷೆ ಮತ್ತು ಸಂಸ್ಕçತಿಯನ್ನು ಉಳಿಸಿ ಬೆಳೆಸಲು ಸಂಕಲ್ಪ ತೊಡಬೇಕು ಎಂದು ಕರೆ ನೀಡಿದರು.
ಅಭಿಯಾನವು ಅ. 30 ರವರೆಗೆ ಚಾಲ್ತಿಯಲ್ಲಿದ್ದು ಕನ್ನಡ ಭಾಷೆಯ ಮಹತ್ವವನ್ನು ಸಾರುವ ಮತ್ತು ಕನ್ನಡದ ಸಂಸ್ಕçತಿಯನ್ನು ಉತ್ಕçಷ್ಟಗೊಳಿಸುವ ಉದ್ದೇಶದಿಂದ ರಾಜ್ಯಾದ್ಯಂತ ಪ್ರಾರಂಭವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕಾರ್ಯಕ್ರಮವನ್ನು ಚಾಲನೆಗೊಳಿಸುವ ಉದ್ದೇಶದಿಂದ ಕಾಲೇಜಿನಲ್ಲಿ ಚಾಲನೆ ಕೊಡಲಾಗಿದೆ ಎಂದರು.
ರಂಗ ಕಲಾವಿದ ದೇವಾನಂದ ವರಪ್ರಸಾದ್ ಮತ್ತು ತಂಡದವರು ಗೀತ ಗಾಯನ ನಡೆಸಿಕೊಟ್ಟರು. ಸಿಡಿಸಿ ಕಾಯಾಧ್ಯಕ್ಷ ಎಸ್.ಸಿ. ಚೌಡೇಗೌಡ, ಪ್ರಾಂಶುಪಾಲ ಬಸವರಾಜು ಮತ್ತು ಉಪನ್ಯಾಸಕರು ಇದ್ದರು.
ಸಂಪಾದಕ ರವಿ
0 Comments