ಅರಕಲಗೂಡು: ತಾಲೂಕಿನಲ್ಲಿ ಹಾದು ಹೋಗಿರುವ ಮಾಗಡಿ- ಸೋಮವಾರಪೇಟೆ ರಸ್ತೆ ವಿಸ್ತರಣೆ ಕಡಿತಗೊಳಿಸದಂತೆ ಬೀದಿಗೆ ಬಂದು ಬೊಬ್ಬೆ ಹಾಕಿ ಗಿಮಿಕ್ ರಾಜಕಾರಣ ಮಾಡುವುದು ಯಾಕೆ, ಅವರದೇ ಸರ್ಕಾರ ಇದೆಯಲ್ಲ ಹೆಚ್ಚು ಕಡಿಮೆಯಾಗಿದ್ದರೆ ಸರಿಪಡಿಸಲಿ ಎಂದು ಶಾಸಕ ಎ.ಟಿ. ರಾಮಸ್ವಾಮಿ ಅವರು ಬಿಜೆಪಿ ಮುಖಂಡ ಎ. ಮಂಜು ವಿರುದ್ದ ಕಿಡಿಕಾರಿದರು.
ಗಂಜಲಗೂಡು ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, 2017ರಲ್ಲಿ ರಸ್ತೆ ಅಭಿವೃದ್ಧಿಗೆ ಯೋಜನಾ ವರದಿ ತಯಾರಿಸಿ ವರ್ಲ್ಡ್ ಬ್ಯಾಂಕ್ ನಲ್ಲಿ ಸಾಲ ಪಡೆದು ಟೆಂಡರ್ ಕರೆದು ಮಂಜೂರಾಗಿದೆ. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಶಂಕುಸ್ಥಾಪನೆ ನಡೆಸಿದ್ದರು. ಈಗ ಡಿಪಿಆರ್ ಪ್ರಕಾರವೇ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಯೋಜನಾ ವರದಿಗೆ ವಿರುದ್ದವಾಗಿ ವ್ಯತ್ಯಾಸವಾಗಿದ್ದರೆ ಕೇಳಬಹುದಿತ್ತು. ವಿರೋಧ ಪಕ್ಷದವರಾಗಿ ನಾವು ಕೇಳಬೇಕಿತ್ತು. ಆದರೆ ನಾವು ಸುಮ್ಮನಿದ್ದೇವೆ. ತಾಲೂಕು ವ್ಯಾಪ್ತಿ ರಸ್ತೆ ವಿಸ್ತರಣೆ ಕಡಿತಗೊಳಿಸಲಾಗುತ್ತಿದೆ ಎಂದು ಹೇಳುತ್ತಿರುವ ಆ ಪುಣ್ಯಾತ್ಮ ಅವರದೆ ಸರ್ಕಾರದ ಜತೆ ಮಾತನಾಡಿ ಸರಿಪಡಿಸಲಿ ಎಂದು ಎ. ಮಂಜುಗೆ ತಿರುಗೇಟು ನೀಡಿದರು.
0 Comments