ಕೋವಿಡ್ ಪೀಡಿತರ ಹಳ್ಳಿಗಳಿಗೆ ಎಸಿ ಗಿರೀಶ್ ನಂದನ್, ತಹಸೀಲ್ದಾರ್ ರೇಣುಕುಮಾರ್ ಭೇಟಿ

ಅರಕಲಗೂಡು: ಕರೊನಾ ಪೀಡಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಕೇಂದ್ರಗಳಿಗೆ ಕಳುಹಿಸುವ ಮುಖೇನ ಹಳ್ಳಿಗಳಲ್ಲಿ ಸೋಂಕು ಹರಡುವುದನ್ನು ತಪ್ಪಿಸಬೇಕು ಎಂದು ಸಕಲೇಶಪುರ ಉಪ ವಿಭಾಗಾಧಿಕಾರಿ ಗಿರೀಶ್ ನಂದನ್ ವಾರಿರ‍್ಸ್ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ತಾಲೂಕಿನ ರಾಮನಾಥಪುರ, ಬಸವಾಪಟ್ಟಣ, ಬೇಡರಕೊಪ್ಪಲು ಗ್ರಾಮಗಳಿಗೆ ಗುರುವಾರ ಭೇಟಿ ನೀಡಿ ಕೋವಿಡ್ ಪೀಡಿತರ ಆರೋಗ್ಯ ಸ್ಥಿತಿಗತಿ ವಿಚಾರಿಸಿ ಮಾತನಾಡಿದ ಅವರು, ಕರೊನಾ ಎರಡನೇ ಅಲೆಯ ವೇಗವನ್ನು ಇನ್ನಷ್ಟು ತೀವ್ರತರ ಪ್ರಮಾಣದಲ್ಲಿ ತಗ್ಗಿಸಿದರಷ್ಟೇ ಮೂರನೇ ಅಲೆ ಹರಡುವುದನ್ನು ತಪ್ಪಿಸಲು ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಕರೊನಾ ವಾರಿರ‍್ಸ್ಗಳು ಕೋವಿಡ್ ಪೀಡಿತರ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲಿಸುವ ಮೂಲಕ ಸಿಸಿ ಕೇಂದ್ರಕ್ಕೆ ಕಳುಹಿಸಲು ಅವರ ಮನವೊಲಿಸುವ ಕೆಲಸ ಮಾಡಬೇಕು. ಇದರಿಂದ ಸೋಂಕಿತರಿಗೆ ಉತ್ತಮ ಊಟ, ಔಷದೋಪಚಾರ ಒದಗಿಸಿ ಆರೋಗ್ಯ ಕಾಪಾಡಲು ನೆರವಾಗಲಿದೆ ಎಂದರು.

ತಹಸೀಲ್ದಾರ್ ವೈ.ಎಂ. ರೇಣುಕುಮಾರ್, ರಾಮನಾಥಪುರ ನಾಡಕಚೇರಿ ಉಪ ತಹಸೀಲ್ದಾರ್ ಸಿ. ಸ್ವಾಮಿ, ಗ್ರಾಮ ಲೆಕ್ಕಾಧಿಕಾರಿ ಮದನ್, ರ‍್ಮೇಶ್, ಬಸವಾಪಟ್ಟಣ ರ‍್ಕಾರಿ ಆಸ್ಪತ್ರ ವೈದ್ಯಾಧಿಕಾರಿ ಡಾ. ರಾಜೇಶ್, ಆಶಾ ಕರ‍್ಯರ‍್ತೆಯರು, ಸಿಬ್ಬಂದಿ ಇದ್ದರು. 


                          ಸಂಪಾದಕ - ರವಿ                    

Post a Comment

0 Comments